Posts

ಅರ್ಥಶೋಧ

ಅಂತರಂಗದ ಪ್ರಶ್ನೆ ಕೆಣಕುತಿಹುದು  ಅಂತರಾತ್ಮನ ನಿತ್ಯ ಅಣುಕುತಿಹುದು ಎತ್ಯಹೊರಟಿಯೊ ಮರುಳೆ ಅರ್ಥಕ್ಕಾಗಿ  ಪುರುಷಾರ್ಥಗಳ ನೆಪದ ಸ್ವಾರ್ಥಕ್ಕಾಗಿ ಸಂಘರ್ಷ ಹೋರಾಟ ಖಾತ್ರಿಯಾಗಿ ದಿಕ್ಸೂಚಿ ಇರದ ಚಿರಯಾತ್ರೆಯಾಗಿ    ಗುರಿಯೆಡೆಗೆ ಹೆದ್ದಾರಿ ಅನುಮಾನವೇ ಹೆಜ್ಜೆಹೆಜ್ಜೆಯ ತಿರು ವು ಅನಿವಾರ್ಯವೇ ಗೊಂದಲದ ನಡಿಗೆಯಿದು ನಿಯತಿಯೇನು ಬದುಕ ಯೋಜನೆಯೆಲ್ಲ ಭ್ರಾಂತವೇನು  ಅನುದಿನದ ಬಡಿದಾಟ ಅರ್ಥಕ್ಕಾಗಿ ತೀವ್ರತೆಯ ಹುಡುಕಾಟ ವ್ಯರ್ಥವಾಗಿ ಬರಿದೆ ಓಟವು ದಿನವೂ ಆರ್ಥಿಕತೆಯಡೆಗೆ.  ಹೆಜ್ಜೆ ಹಾಕುವುದೆಂತು ಸಾರ್ಥಕತೆಯಡೆಗೆ  ಕಾತುರದಿ ಕೇಳುವೆನು ನನ್ನೇ ನಾನು   ವಿಧಿಯಟ್ಟಹಾಸವಿದು ನ್ಯಾಯವೇನು ಹೇಳು ದೇವರೇ ನನ್ನ ತಪ್ಪದೇನು ಎಲ್ಲವನು ಮೌನದಲೇ ಒಪ್ಪಲೇನು ✍️ನಾಬಾಹಿ

ಆಯುರ್ವೇದದ ವಿಭಾಗಗಳು

                       ಆಯುರ್ವೇದ ಪ್ರಕೃತಿಯಷ್ಟೇ ಸಹಜವಾದದ್ದು. ಸೃಷ್ಟಿಯ ಆರಂಭದಲ್ಲೇ ಆಯುರ್ವೇದ ಅಸ್ತಿತ್ವದಲ್ಲಿದ್ದು, ಮಾನವ ತನ್ನ ವಿಕಸನದ ಹಾದಿಯಲ್ಲಿ ಪ್ರಕೃತಿಯೊಂದಿಗೆನ ಒಡನಾಟದಿಂದ ಕ್ರಮೇಣ ಔಷದ ಶಾಸ್ತ್ರವನ್ನು ಹರಿಯುತ್ತಾ ಹೋದ ಎನ್ನಬಹುದು.  ಐತಿಹಾಸಿಕವಾಗಿ ಆಯುರ್ವೇದವು ಎರಡು ಸಂಪ್ರದಾಯಗಳಾಗಿ ಸಾಗಿ ಬಂದಿದೆ, ದೇವರಾಜ ಇಂದ್ರನಿಂದ ಮೊದಲಾಗಿ ಭಾರದ್ವಜ ಮಹರ್ಷಿಗಳ ಮೂಲಕ ಅತ್ರೇಯಾದಿ ಮಹರ್ಷಿಗಳಲ್ಲಿ ಪ್ರಚಲಿತವಾಗಿದ್ದ “ಔಷಧ ಶಾಸ್ತ್ರ” ವಿಜ್ಞಾನ ಆತ್ರೇಯ ಸಂಪ್ರದಾಯವೆನಿಸಿಕೊಂಡರೆ, ಸಮುದ್ರ ಮಂಥನದ ಧನ್ವಂತರಿಯಿಂದ ಉದ್ಭವವಾಗಿ ಕಾಶಿರಾಜ ದೆವ್ವದಾಸನ ಮೂಲಕ ಸುಶ್ರುತಾದಿ ಮಹರ್ಷಿಗಳಲ್ಲಿ ಪ್ರಚಲಿತವಾಗಿದ್ದ “ಶಸ್ತ್ರ ಚಿಕಿತ್ಸಾ” ವಿಜ್ಞಾನ ಧನ್ವಂತರಿ ಸಂಪ್ರದಾಯ ಎನಿಸಿಕೊಳ್ಳುತ್ತದೆ. ಆತ್ರೇಯ ಮಹರ್ಷಿಗಳ ಶಿಷ್ಯ ಅಗ್ನಿವೇಶ ರಚಿಸಿದ ಅಗ್ನಿವೇಶ ಸಂಹಿತೆಯು ಚರಕ ಮುನಿಯಿಂದ ಪ್ರತಿ ಸಂಸ್ಕರಣೆಗೊಂಡ ಚರಕ ಸಂಹಿತೆ ಆತ್ರೇಯ ಸಂಪ್ರದಾಯದ ಮೂಲ ಗ್ರಂಥವಾಗಿ ಇಂದಿಗೂ ಪ್ರಸ್ತುತವಾಗಿದೆ, ಅಂತೆಯೇ ದಿವೊದಾಸ ಧನ್ವಂತರಿಯ ಶಿಷ್ಯರಾದ ಶುಶ್ರುತಮುನಿಗಳು ರಚಿಸಿದ “ಸುಶ್ರುತ ಸಂಹಿತೆ” ಧನ್ವಂತರಿ ಸಂಪ್ರದಾಯದ ಮೂಲ ಗ್ರಂಥವಾಗಿದೆ.      ಆಯುರ್ವೇದವು ಎಂಟು ವಿಭಾಗಗಳಾಗಿ ವಿಂಗಡಣೆಗೊಂಡಿ...

ಆಯುರ್ವೇದ : ಒಂದು ಕಿರು ಪರಿಚಯ

Image
                    ಆಯುರ್ವೇದವು ಬಹುಶಃ ಮಾನವ ನಾಗರಿಕತೆಯ ಅತ್ಯಂತ ಪುರಾತನ ವೈದ್ಯಶಾಸ್ತ್ರ ಹಾಗೂ ಇಂದಿಗೂ ತನ್ನ ಮೂಲರೂಪದಲ್ಲಿಯೇ ಪ್ರಸ್ತುತವಾಗಿರುವ ಏಕೈಕ ಜೀವನ ಶಾಸ್ತ್ರ. ಆಧುನಿಕತೆಯ ಅಲೆಯಲ್ಲಿ ಅದೆಷ್ಟೋ ಶಾಸ್ತ್ರಗಳು ಕೊಚ್ಚಿಹೋದರೂ ಆಯುರ್ವೇದ ತನ್ನ ಹಿರಿಮೆ ಹಾಗೂ ಗರಿಮೆಗಳಿಂದ ಅಚಲವಾಗಿ ಎಂದಿಗೂ ಸ್ಥಿರವಾಗಿದೆ. ವಿಶ್ವದಾದ್ಯಂತ ಆಯುರ್ವೇದ ಕೇವಲ ವೈದ್ಯಶಾಸ್ತ್ರವಷ್ಟೇ ಅಲ್ಲದೆ ಜೀವನ ವಿಜ್ಞಾನವಾಗಿ ಬಳಕೆಯಾಗುತ್ತಿದೆ. ಆಯುರ್ವೇದ ಒಂದು ಸಂಸ್ಕೃತ ಶಬ್ದ ಇದನ್ನು ಬಿಡಿಸಿದಾಗ “ಆಯಸ್ಸಿನ ಜ್ಞಾನ” ಅಥವಾ “ಜೀವನದ ಜ್ಞಾನ” ಎಂಬ ಕನ್ನಡ ಅರ್ಥ ದೊರೆಯುತ್ತದೆ. ಆದಿ ದಿನಗಳಿಂದಲೂ ಆಯುರ್ವೇದ ವೈಯಕ್ತಿಕ ಆರೋಗ್ಯದ ಜೊತೆ ಜೊತೆಗೆ ಸಮುದಾಯದ ಆರೋಗ್ಯವನ್ನು ಒಂದು ಪ್ರಮುಖ ಕಾಳಜಿಯಾಗಿ ಪರಿಗಣಿಸುತ್ತಾ ಬಂದಿರುವುದು ಇದರ ವಿಶಿಷ್ಟತೆ. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಔಷಧಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಒಟ್ಟು ದೇಶಿಯ ಉತ್ಪಾದನೆ (GDP) ಯಲ್ಲಿ ಹೆಚ್ಚುತ್ತಿರುವ ಆಯುರ್ವೇದದ ಪಾಲುದಾರಿಕೆ ಆಯುರ್ವೇದದ ಮಾನ್ಯತೆಗೆ ಕೈಗನ್ನಡಿಯಾಗಿದೆ.      ಆಯುರ್ವೇದದ ಉಗಮ ಸೃಷ್ಟಿಯ ಉಗಮದೊಂದಿಗೆ ಆಗಿರಬೇಕು. ಆದರೂ ಪ್ರಸ್ತುತ ಪುರಾವೆಗಳ ಪ್ರಕಾರ ಇತಿಹಾಸಕಾರರು ಆಯುರ್ವೇದವನ್ನು ...

ನವಭಾರತಕ್ಕಾಗಿ ಆಯುರ್ವೇದ

Image
                    ‘’ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" 15ನೇ ಶತಮಾನದ ಜ್ಞಾನಮಣಿ ಮುಕುಟ  ಕನಕದಾಸರ ಸಾಲುಗಳಿವು, ಹೊಟ್ಟೆಪಾಡಿಗಾಗಿ ದುಡಿಯಲು ಬಹಳಷ್ಟು ನೌಕರಿಗಳಿವೆ ಆದರೆ ಹೊಟ್ಟೆಪಾಡಿನ ಜೊತೆಜೊತೆಗೆ ಆತ್ಮ ಸಂತೃಪ್ತಿಯನ್ನು ಗಳಿಸಬಹುದಾದ ಕೆಲವೇ ಹುದ್ದೆಗಳಲ್ಲಿ ವೈದ್ಯ ವೃತ್ತಿಯೂ ಒಂದು. ವೈದ್ಯನಾದ ಮಾತ್ರಕ್ಕೆ ಬದುಕು ಸಾರ್ಥಕವೆಂದೆನಲ್ಲ, ವೈದ್ಯನನ್ನು "ಯಮರಾಜ ಸಹೋದರ" ಎಂದೂ ಹೇಳಿರುವುದುಂಟು. ಚರಕ ಸಂಹಿತೆ ಪ್ರತಿಪಾದಿಸುವಂತೆ ಕೋಚಿತ್ ಧರ್ಮಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕೊಚಿತ್ ಅರ್ಥಕ್ಕೆ ನಂತರದ ಆದ್ಯತೆ ಬರಬೇಕು.              ವಿಶ್ವ ಸಂಸ್ಕೃತಿಗೆ ಭಾರತದ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗ ಮತ್ತು ಆಯುರ್ವೇದ ಅಗ್ರಮಾನ್ಯವಾದವುಗಳು. ಜ್ಞಾನ ಮತ್ತು ಸಂಸ್ಕೃತಿಗಳೇ ಜಗತ್ತನಾಳುವ ಶಕ್ತಿಗಳು ಇವನ್ನು ಸಾಫ್ಟ್ ಪವರ್ಸ್ ಎಂದು ಪರಿಗಣಿಸಲಾಗುತ್ತದೆ. ಭಾರತ ಮರಳಿ ವಿಶ್ವಗುರುವಾಗಲು ಈ ಸಾಫ್ಟ್ ಪವರ್ ಗಳ ಕುರಿತು ಹೆಚ್ಚು ಗಮನಹರಿಸಬೇಕಿದೆ, ಭಾರತ ಸರ್ಕಾರ, ಅಣುಶಕ್ತಿ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನಗಳ  ಜೊತೆಗೆ ಕಲೆ ಮತ್ತು ಸಂಸ್ಕೃತಿಗಳ ಉತ್ತೇಜನಕ್ಕಾಗು ಆದ್ಯತೆ ನೀಡುತ್ತಿರುವುದು ಶ್ಲಾಘನೀಯ.  G20 ಶೃಂಗಸಭೆಯ ನಾಯಕತ್ವದಲ್ಲಿ ಭಾರತ ಸಂಸ್ಕೃತಿಯ ಅನಾವರಣ ಜಗತ್ತಿಗಾ...

ರಾಮನಷ್ಟು..

Image
ಕಾರ್ಪಣ್ಯಗಳಿಗಂಜಿ ಬದುಕುತಿರುವೆ ಬಂದಿಹುದನೆದುರಿಸದೆ ಬೆದಕುತಿರುವೆ ತಿರುಗಿ ನೋಡು ನಿನ್ನ ಕಷ್ಟವೆಷ್ಟು? ಸಹಿಸಬಲ್ಲೆಯ ನೀನು ರಾಮನಷ್ಟು ಮಾತನುಳಿಸಲು ಮುಕುಟ ಪಟ್ಟಬಿಟ್ಟು ನೆಡೆದನಡವಿಗೆ ನಾರುಮುಡಿಯ ತೊಟ್ಟು ಗಮನಿಸೊಮ್ಮೆ ನಿನ್ನ ನಷ್ಟವೆಷ್ಟು? ಸಹಿಸಬಲ್ಲೆಯ ನೀನು ರಾಮನಷ್ಟು  ಕ್ರೂರರಕ್ಕಸಸಮರ ಲೋಕಹಿತಕೆ ಸತಿಸುತರನೇ ತೊರೆದ ಪ್ರಜಾಹಿತಕೆ ಮರಳಿ ನೋಡು ನಿನ್ನ ಚಿಂತೆಯೆಷ್ಟು ಸಹಿಸಬಲ್ಲೆಯ ನೀನು ರಾಮನಷ್ಟು  ಸಂಘರ್ಷವೆದುರಿಸುತ ಧೈರ್ಯದಿಂದ  ಅಲೆಗು ಸೇತುವೆಯಿತ್ತ ಸ್ಥೈರ್ಯದಿಂದ ಅವಲೋಕಿಸು ನಿನ್ನ ದೃಢತೆಯೆಷ್ಟು ಸಹಿಸಬಲ್ಲೆಯ ನೀನು ರಾಮನಷ್ಟು ಅಪವಾದ ನಿಂದನೆಗೆ ತತ್ತರಿಸದೆ  ಕ್ಷಮೆಯಿತ್ತ ಮತ್ಸರವ ಬಿತ್ತರಿಸದೆ ಯೋಚಿಸೊಮ್ಮೆ ನಿನ್ನ ಸಹನೆಯೆಷ್ಟು ಸಹಿಸಬಲ್ಲೆಯ ನೀನು ರಾಮನಷ್ಟು  ನಗುನಗುತ ನುಂಗಿಬಿಡು ಕಹಿಯನಿಷ್ಟು ಭವಣೆ ನಿನಗಿರದೆಂದು ಸಹಿಸದಷ್ಟು  ಭರವಸೆಯರಿವಿನ ದೀಪ ಉರಿಸಿದಷ್ಟು ಬದುಕು ಹೊಳೆವುದು ನಿನದು ರಾಮನಷ್ಟು  ಅವತಾರ ನೆಪ ಭಜಿಸು ಮೌಲ್ಯಗಳನು  ಶತಮಾನಕು ನಶಿಸದಿಹ  ತತ್ವಗಳನು ಸನ್ನಡತೆ ವ್ರತವಾಗಿಸು ಮನುಜೋತ್ತಮ ಕಲಿಯುಗಕೆ ರಘುವಾಗು ಪುರುಷೋತ್ತಮ                                          ✍️ನಾಬಾಹಿ 

ಅರೆಗಣ್ಣಯೋಧ

Image
ಏನಹೇಳಲಿ ನಾನು ಅರೆಗಣ್ಣ ಯೋಧ, ಎಡೆಬಿಡದೆ ಸಾಗಿದೆ ಜೀವನದ ಶೋಧ ಆದರ್ಶಗಳ ಬೆದಕಿ ಅಲೆದಾಟವಾಯ್ತು ಅರ್ಥವರಿಯದ ಶ್ವಾಸ ಅನವರತವಾಯ್ತು ಹುಡುಕಿ ಸೋತರು ಸಾಕ್ರಿಟೀಸ ಡಯಜೀನ ಕಲಿಯುಗದಿ ಸದ್ಗುಣವೂ ಮೇಡಿನ್ನು ಚೀನ ಯಾರು ಹೊಣೆ ದೈವದೀ ಸಂಚುಗಳಿಗೆಲ್ಲ ಎದೆಗೆ ಬಡಿದ ಸಿಡಿಲು ಮಿಂಚುಗಳಿಗೆಲ್ಲ ಸವಿದು ಚಪ್ಪರಿಸಾಯ್ತು ನೋವೆಲ್ಲವನ್ನು ಸಾವೊಂದೆ ಸಿಹಿ ಭಕ್ಷ ದೊರೆತಿಲ್ಲವಿನ್ನು. ಏನೊ ಹುಡುಕಿ ದಿನವು ಚಡಪಡಿಸುತಿರುವೆ ಅರಿಯದಾದೇನು ಕೊನೆಗೂ ಏನನರಸಿರುವೆ ಬೇಡದ ಬೇಕುಗಳು ಮಿಕ್ಕಿಹವು ಇನ್ನಷ್ಟು ನಕ್ಕು ಬಿಡು ಬದುಕೆ ಜೀವಿ ಸುವೆ ಒಂದಿಷ್ಟು. ✍️ನಾಬಾಹಿ

ಸಿರಿಗನ್ನಡ ವೈಭವ

Image
ಕನ್ನಡಸಿರಿ ವೈಭವವಿದು ಸಭ್ಯತೆಗಳ ಬಟ್ಟಲು ಜ್ಞಾನ ಗೀತೆ ನೀತಿ ನಾಟ್ಯ ಶಿಲ್ಪಕಲೆಯ ತೊಟ್ಟಿಲು ||೧||   ನದಿಮಲೆಗಳ ಹಸಿರೆಲೆಗಳ ತಂಗಾಳಿಯ ಜೋಗುಳ ಕಡಲಲೆಗಳ ಕರುನಾಡಿದು ಪ್ರಕೃತಿಗಿದೇ ದೇಗುಲ  ||೨||   ಜಕಣ ಚವನ ಚಾವುಂಡರು  ಉಳಿಯ ಹಿಡಿದು ತನ್ಮಯ ಜೀವತುಂಬಿ ಮೂಡಿಬಂದ ವಾಸ್ತು ಶಿಲ್ಪ ವಿಸ್ಮಯ  ||೩||   ಜಿನಬಸದಿ ಬುದ್ಧಚೈತ್ಯ ಸರ್ವಧರ್ಮ ಸಾರಿವೆ ಗುರುದ್ವಾರ ಮಂದಿರಶಿಲೆ ಇತಿಹಾಸವ ಹಾಡಿವೆ  ||೪||   ಕನಕ ವಾದಿ ವಿಜಯ ವ್ಯಾಸ ಪುರಂದರರ ಕೀರ್ತನೆ ಬೇಂದ್ರೆ ಮಾಸ್ತಿ ಕೃಷ್ಣರಾಯ ಪುಟ್ಟಪ್ಪರ ಪ್ರಾರ್ಥನೆ  ||೫||   ಗಂಗದಂಬ ಚೋಳಕೂಟ ಹೊಯ್ಸಳ ಚಾಲುಕ್ಯರು ಶಾಸನದಲೆ ಕಾವ್ಯ ಬೆಸೆದ ಒಡೆಯ ನಾಯ್ಕ ಬುಕ್ಕರು  ||೬||   ಹಿರಿಮೆ ಮರೆತು ಸಿಲುಕದಿರಿ  ದುರಭಿಮಾನ ಸುಳಿಯಲಿ ಕೆಚ್ಚೆದೆಯಲಿ ಬಡಿದೆಬ್ಬಿಸಿ ನವ ಪೀಳಿಗೆ ಉಳಿಯಲಿ  ||೭||   ಚಿರಮೌಡ್ಯದ ನಿದ್ರೆ ಸಾಕು ಇಂದಾದರೂ ಏಳಿರಿ ಘನವೈಭವ ಪರಂಪರೆ ನಾಡ ಸಿರಿಯ ಹಾಡಿರಿ  ||೮||