ಅರ್ಥಶೋಧ
ಅಂತರಂಗದ ಪ್ರಶ್ನೆ ಕೆಣಕುತಿಹುದು
ಅಂತರಾತ್ಮನ ನಿತ್ಯ ಅಣುಕುತಿಹುದು
ಎತ್ಯಹೊರಟಿಯೊ ಮರುಳೆ ಅರ್ಥಕ್ಕಾಗಿ
ಪುರುಷಾರ್ಥಗಳ ನೆಪದ ಸ್ವಾರ್ಥಕ್ಕಾಗಿ
ಸಂಘರ್ಷ ಹೋರಾಟ ಖಾತ್ರಿಯಾಗಿ
ದಿಕ್ಸೂಚಿ ಇರದ ಚಿರಯಾತ್ರೆಯಾಗಿ
ಗುರಿಯೆಡೆಗೆ ಹೆದ್ದಾರಿ ಅನುಮಾನವೇ
ಹೆಜ್ಜೆಹೆಜ್ಜೆಯ ತಿರು ವು ಅನಿವಾರ್ಯವೇ
ಗೊಂದಲದ ನಡಿಗೆಯಿದು ನಿಯತಿಯೇನು
ಬದುಕ ಯೋಜನೆಯೆಲ್ಲ ಭ್ರಾಂತವೇನು
ಅನುದಿನದ ಬಡಿದಾಟ ಅರ್ಥಕ್ಕಾಗಿ
ತೀವ್ರತೆಯ ಹುಡುಕಾಟ ವ್ಯರ್ಥವಾಗಿ
ಬರಿದೆ ಓಟವು ದಿನವೂ ಆರ್ಥಿಕತೆಯಡೆಗೆ.
ಹೆಜ್ಜೆ ಹಾಕುವುದೆಂತು ಸಾರ್ಥಕತೆಯಡೆಗೆ
ಕಾತುರದಿ ಕೇಳುವೆನು ನನ್ನೇ ನಾನು
ವಿಧಿಯಟ್ಟಹಾಸವಿದು ನ್ಯಾಯವೇನು
ಹೇಳು ದೇವರೇ ನನ್ನ ತಪ್ಪದೇನು
ಎಲ್ಲವನು ಮೌನದಲೇ ಒಪ್ಪಲೇನು
✍️ನಾಬಾಹಿ
Comments
Post a Comment