ಅಭಯಹಸ್ತ


ಎಲ್ಲ ಶಕ್ತಿಯು ನಿಮ್ಮಲಿಹುದು
ತಡವು ಏತಕೆ ವೃತ್ತಿಗೆ ।
ಕಾದು ಕುಳಿತಿಹರೆಲ್ಲ ಜನರು
ನಿಮ್ಮಗಾದ ಪ್ರವೃತ್ತಿಗೆ ।।


ಒಗೆದು ಬಿಸುಡಿ ಸೋಲ ಭಯಗಳ
ಸೋಲೆ ಗೆಲುವಿಗೆ ಮೆಟ್ಟಿಲು ।
ಸೋಲೆಬಾರದು ಪರಿಶ್ರಮದಲಿ
ಪ್ರಯತ್ನಿಸಾಗಸ ಮುಟ್ಟಲು ।।


ಕೀಳರಿಮೆಯೇ ದೊಡ್ಡ ಶತ್ರುವು
ಎಲ್ಲ ಕನಸಿಗೆ ಬಾಧವು ।

ಚಿತ್ತ ಸ್ಥಿರತೆಯು, ನಿಶ್ಚಲಾತ್ಮವು,
ಗುರಿಯ ತಲುಪಲು ಬೋಧವು ।।


ಏಳಿ ಯೋಧರೆ ಹಾರಿ ಶಿಖರಕೆ,
ಕಣ್ಣು ಮುಚ್ಚುವ ಮುನ್ನವೇ ।
ಉಸಿರು ಕಳೆದು, ಹೆಸರು ಅಳಿದು,
ಮಣ್ಣು ಮುಚ್ಚುವ ಮುನ್ನವೆ ।।

✍️ನಾಬಾಹಿ

Comments

Popular posts from this blog

ವೈದ್ಯೋ ನಾರಾಯಣೋ ಹರಿಃ

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ