ತಸ್ಮೈ ಶ್ರೀ ಗುರವೇ ನಮಃ🙏

ಎನಿತು ನಮಿಸಲಿ ಆತ್ಮಬಂಧುವೆ
ಆಪ್ತರಕ್ಷಕರೆ ಶಿಕ್ಷಕರು
ಕೋಟಿ ನಮನಕೂ ನಿಲುಕಲಾರರು
ಜ್ಞಾನ ಮಂದಿರದ ಅರ್ಚಕರು 

ನುಡಿಯಕಲಿಸಿದರು ನೆಡೆಯಕಲಿಸಿದರು
ನಾಡ ಕಟ್ಟುವ ಕಿಚ್ಚುಹಚ್ಚಿದರು
ನೀತಿ ಕಲಿಸುತಲೆ ಪ್ರೀತಿ ಕಲಿಸಿದರು
ದೇಶ ಸೇವೆಯ ಹುಚ್ಚು ಮೆಚ್ಚಿದರು 

ನೂನ್ಯ ನಾನು ಶೂನ್ಯ ನಾನು
ಸಿದ್ದಿ ಗುರುವಿನ ಭಿಕ್ಷೆಯು
ಗುರುವ ವರಕಿಂ ಗರಿಮೆಯೇನು
ಗುರುವ ಹರಕೆಯೆ ರಕ್ಷೆಯು 

ಹರಸಿ ಮೆರೆಸಿ ಅರಿವ ಹರಿಸಿ
ಮೂರ್ತಿಯಾಗಿಸಿ ನಾಳೆಗೆ
ಮಂದಗಣ್ಣಿಗೆ ಬೆಳಕನೆರೆದರು
ಶಿಲ್ಪಿಯಾದರೂ ಬಾಳಿಗೆ

ಗುರುವ ತೊರೆಯೆನು ಸ್ವಪ್ನದಲ್ಲೂ
ಬದುಕ ಋಣವೇ ಮೀಸಲು
ನಿಮ್ಮ ನೆನಪೇ ಮೊದಲು ನನಗೆ
ತಂಪು ಗಾಳಿಯೆ ಬೀಸಲು.

✍️ ನಾಬಾಹಿ
ಡಾ. ಹಿತೇಶ್ ಪ್ರಸಾದ್ ಬಿ.

Comments

Popular posts from this blog

ವೈದ್ಯೋ ನಾರಾಯಣೋ ಹರಿಃ

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ