ಆಯುರ್ಜೋತಿ.🏮
ಬನ್ನಿ ಹರಡೋಣ ಆಯುರ್ವೇದವ ಹರಡೋಣ.
ಆಯುರ್ವೇದದ ಅರಿವಿನ ಬೆಳಕನು ಎಲ್ಲೆಡೆ ಹರಡೋಣ. llಪll
ಸ್ವಸ್ಥ ಬದುಕಿಗೆ, ರೋಗ ಶಮನಕ್ಕೆ ಇದುವೇ ಔಷಧವು
ದಿನಋತುಚರ್ಯ ರಸಾಯನ ಯೋಗದಿ ಸಾರ್ಥಕ ಜೀವನವು ll೧ll
ಸ್ವಾರ್ಥವ ತೊರೆದು ಪರಾರ್ಥಕೆ ಬದುಕುವ ಸದೃತ್ತವ ಅರಿತು
ಸ್ವಚ್ಛ ಸಮಾಜವ ಸೇರಿಯೇ ಕಟ್ಟುವ ಭೇದಗಳನು ಮರೆತು. ll೨ll
ಕಾಯ ವಾಚ ಮನಸಾ ಪರರಿಗೆ ಕೇಡನ್ನು ಬಗೆಯದಿರಿ
ಕರುಣೆ ಪ್ರೇಮದಿ ಬೆರೆತು ಬದುಕಿರಿ ಸೇಡನ್ನು ಬಯಸದಿರಿ ll೩ll
ದೇಹ ಮನ: ಸಮಾಜವ ಕಾಯುವ ವೈದ್ಯನೆ ಶಿಕ್ಷಕನು.
ರೋಗರುಜಿನಗಳ ತಡೆದು ಬದುಕಲು ಕಲಿಸುವ ರಕ್ಷಕನು. ll೪ll
ಆರ್ತರ ಸೇವೆಗೆ ಆಯುವ ಸವೆಸುವ ಅನುದಿನವೂ ಶ್ರಮಿಸೀ.
ಆಪ್ತರ ನೆನೆದು ಮುಂದೆ ಸಾಗುವ ಧನ್ವಂತ್ರಿಗೆ ನಮಿಸಿ. ll೫ll
- ✍️ನಾಬಾಹಿ
Comments
Post a Comment