ಸ್ವಚ್ಛ ಭಾರತ..🇮🇳
ಸ್ವಚ್ಛ ಭಾರತ..🇮🇳
ಎಲ್ಲಿಯದದು ಸ್ವಚ್ಛತೆ..
ಸುಳ್ಳನಾಡಿ ಕೊಳ್ಳೆಹೊಡೆದ ಶುಭ್ರ ಬಿಳಿಯಬಟ್ಟೆಯಲೋ..
ದುಡಿದು ಬೆವರ ಹರಿಸಿ ಹಸಿದ ಕೂಲಿಯವನ ರೊಟ್ಟಿಯಲೋ..??
ಲಂಚಕಾಗಿ ದೀನರೆದೆಯ ಭಗೆವ ಖಾಕಿ ಸೆಂಟಿನಲೋ,
ತಿಪ್ಪೆಬದಿಗೆ ಹಂಚಿತಿಂದ ಭಿಕಾರಿ ಗುಣ ಸುಗಂಧದಲೋ..??
ಬಾಹ್ಯ ಶುದ್ದಿ ಮಾಯೆಯಾಟ, ಮುಖ್ಯ ಒಳಗೆ ಸ್ವಚ್ಛವು..
ಅಂತರಂಗ ಶುಭ್ರವಿರಲು ಸ್ವಚ್ಛ ರಾಷ್ಟ್ರ ಸಿದ್ಧವು..
ಮನದ ಕಸವ ತೊಡೆಯಲಾಚೆ ಸ್ವಸ್ಥವಹುದು ಭಾರತ..
ವಿದ್ಯೆಹಣತೆ ಎಲ್ಲಾ ಹಚ್ಚೆ
ಸ್ವಚ್ಛವಹುದು ಭಾರತ🙏🏻
✍🏻..ನಾಬಾಹಿ
ಹಿತೇಶ್ ಪ್ರಸಾದ್ ಬಿ.
(ಜ.ನ.ವಿ_ಹಾಸನ)
Comments
Post a Comment