ವಿಶ್ವಗುರು ಭಾರತ..🙏
ವಿಶ್ವಗುರು ಭಾರತದ ಶ್ರೇಷ್ಠತೆ ಹೆಮ್ಮೆಯಿಂದಲಿ ಹಾಡುವ
ಭಾವರಾಗತಾಳದೊಂದಿಗೆ ಬನ್ನಿ ಐಕ್ಯತೆ ಸಾರುವ
ಗಾಂಧಿ ಭೊಸರ ವೀರ ಭಗತರ ದಿಟ್ಟ ಮಾರ್ಗದಿ ಸಾಗುವ
ಸತ್ಯ ಧರ್ಮಕೆ ನ್ಯಾಯ ನಿಷ್ಠೆಗೆ ನಿತ್ಯ ಶಿರಸಾ ಬಾಗುವ
ಶಿಸ್ತು ಸೌಹಾರ್ದತೆಯ ತೋರಿದ ನಮ್ಮ ಚೊಚ್ಚಲ ಸಭ್ಯತೆ
ಘನ ಪರಂಪರೆ ಉಳಿಸಿ ಬೆಳೆಸಲು ಇರಲಿ ನಮ್ಮಯ ಬದ್ಧತೆ
ಸಹ್ಯ ವಿಂದ್ಯ ಗಿರಿ ಹಿಮಾಲಯ ನಮ್ಮ ಕಾಯುವ ತಂದೆಯು
ಗಂಗೆ ಯಮುನೆ ತುಂಗೆ ಕೃಷ್ಣೇಯರೆಮ್ಮ ತಣಿಸುವ ತಾಯಿಯು
ಸ್ವರ್ಗವೀ ನೆಲ ಭರತ ಭೂಮಿಯೆ ನಮ್ಮ ಲಾಲಿಸೊ ತೊಟ್ಟಿಲು
ರಾಮಕೃಷ್ಣ ಬುದ್ಧರುದಿಸಿದ ಜಗದ ಶಾಂತಿಯ ಬಟ್ಟಲು
ಜ್ಞಾನ ದಾನ ಮಾನ ಮೆರೆದು ವಿಶ್ವದಗ್ರವ ಮುಟ್ಟುವ
ಬನ್ನಿರೆಲ್ಲರು ಸೇರಿ ಶ್ರಮಿಸುತ ಮೇರು ರಾಷ್ಟ್ರವ ಕಟ್ಟುವ
ಜಾತಿ ಮತಗಳ ಪಂಥ ಮುರಿದು ಎಲ್ಲ ಸೋದರraguva
ಬಡವ ಬಲ್ಲಿದ ಭೇದ ತೊರೆದು ಎಲ್ಲರೂ ಒಂದಾಗುವ
ಮೌಡ್ಯದಜ್ಞಾನವನು
ದಹಿಸಿ ಜ್ಞಾನ ಜ್ಯೋತಿಯ ಬೆಳಗುವ
ಮಾತೃ ಭೂಮಿಗೆ ದೇಹ ಸವೆಸುವ ಬದುಕನನುದಿನ ಬಾಳುವ
ತ್ಯಾಗ ಬಲಿದಾನಗಳ ತವರು ಧೀರ ಯೋಧರ ನಾಡಿದು
ಸಕಲ ಧರ್ಮವ ಸಕಲ ಶಾಸ್ತ್ರವ ಸಾಕಿ ಸಲುಹಿದ ಬೀಡಿದು
ಭಾರತಾಂಬೆಯ ಮಕ್ಕಳೇಲ್ಲರು ವಿಶ್ವಮಾನವರಾಗುವ
ಯಾರ ಬೇಡದೆ ಕೈಯ ಚಾಚದೆ ಆತ್ಮನಿರ್ಭರರಾಗುನ
✍🏻..ನಾಬಾಹಿ
ಡಾ. ಹಿತೇಶ್ ಪ್ರಸಾದ್ ಬಿ.
(ಜ.ನ.ವಿ_ಹಾಸನ)
Comments
Post a Comment