ಕರ್ಣನಂತಾಗು ಮನವೇ...


ಕರ್ಣನಂತಾಗು ಮನವೇ,

ಕರ್ಣನಂತಾಗು...

ಹೊಸಕಿ ಹಾಕಲು ನಿನ್ನ ನೂರು ಶಕ್ತಿಗಳುದಿಸೆ,
ಹಸಿವಿನ ಬಲದಲೆ ಬದುಕ ಹಸನಾಗಿಸಿದ
ಕರ್ಣನಂತಾಗು ಮನವೇ ಕರ್ಣನಂತಾಗು..


ಗುರುವೆಲ್ಲು ದೊರಕದೆ ಎಲ್ಲರೂ ಕಡೆಗಣಿಸೆ,
ಛಲವನ್ನೇ ಗುರುವೆನಿಸಿ ಕೆಚ್ಚೆದೆಯ ಕಿಚ್ಚಾದ
ಕರ್ಣನಂತಾಗು ಮನವೇ ಕರ್ಣನಂತಾಗು...


ತನ್ನಳಿವಿಗಳುಕದೆ ಕವಚಧಾರೆಯನೆರದು
ಧರೆಮರೆಯದಾ ದಾನಶೂರನಾಗುಳಿದ
ಕರ್ಣನಂತಾಗು ಮನವೇ ಕರ್ಣನಂತಾಗು...


ಸಾಮರ್ಥ್ಯಕ್ಕೆಂದೊಂದು ವೇದಿಕೆ ಸಿಗದೆಯೂ,
ಅಸಮಾನ್ಯ ಶೌರ್ಯದಿಂ ಅಮರನಾಗುಳಿದ,
ಕರ್ಣನಂತಾಗು ಮನವೇ ಕರ್ಣನಂತಾಗು...


ಒಡೆಯನಿಗಿತ್ತೊಂದು ಮಾತನೂ ಒಡೆಯದೆ
ಒಡನಾಡಿ ಆಗುಳಿದು ಒಡನೆಯೇ ಸಾಗಿದ
ಕರ್ಣನಂತಾಗು ಮನವೇ ಕರ್ಣನಂತಾಗು...


ಬದಿಗಿರಿಸು ನಿನ್ನೆಲ್ಲ ಬಯಕೆಗಳ ಮನವೇ
ಬದುಕು ನೊಂದವರ ನಗಿಸಿ ಬೆಳಗಲಿ ಜಗವೆ
ಕರ್ಣನಂತಾಗು ಮನವೇ ಕರ್ಣನಂತಾಗು...


✍🏼ನಾಬಾಹಿ

Comments

Popular posts from this blog

ವೈದ್ಯೋ ನಾರಾಯಣೋ ಹರಿಃ

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ