ವೈದ್ಯೋ ನಾರಾಯಣೋ ಹರಿಃ
ಏನಿದು ವೈದ್ಯೋ ನಾರಾಯಣೋ ಹರಿಃ??🤔 ಇಂದು ಮುಂಜಾನೆಯಿಂದಲೂ ಎಲ್ಲರ ಬಾಯಲ್ಲೂ ಕೇಳಿದ ಒಂದೇ ಸಾಲು ವೈದ್ಯೋ ನಾರಾಯಣೋ ಹರಿಃ, ಕನ್ನಡದಲ್ಲಿ ಓದಿದಾಗ ಸಹಜವಾಗಿಯೇ ಇದರ ಅರ್ಥವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಹೆಚ್ಚು.. ನೀವೇನಂದುಕೊಂಡಿದ್ದೀರಿ?! ವೈದ್ಯ ಸಾಕ್ಷಾತ್ ನಾರಾಯಣನಿಗೆ ಸಮ ಎಂದೇ?!! ಇದೊಂದು ಸಂಸ್ಕೃತ ಸುಭಾಷಿತದ ಶ್ಲೋಕ.. ಈ ಶ್ಲೋಕವನ್ನು ಪೂರ್ಣವಾಗಿ ಒಮ್ಮೆ ಅವಲೋಕಿಸೋಣ.. शरीरे जर्जरीभूते व्याधिग्रस्ते कलेबरे । औषधं जाह्नवीतोयं वैद्यो नारायणो हरिः ॥ ಆಯುರ್ವೇದದ ಕೃಪೆಯಿಂದಾಗಿ ನಾನರಿತಿರುವ ಸಂಸ್ಕೃತದ ಅಲ್ಪ ಜ್ಞಾನದಿಂದ ಇದರ ಅರ್ಥವನ್ನು ಹೀಗೆನ್ನಬಹುದು.. "ತೀವ್ರ ವ್ಯಾಧಿಯಿಂದ ಹೀನಾಯ ಸ್ಥಿತಿಯಲ್ಲಿರುವ ದೇಹಕ್ಕೆ ಗಂಗಾಜಲವೇ ಔಷಧ ಮತ್ತು ಸಾಕ್ಷಾತ್ ನಾರಾಯಣನೇ ವೈದ್ಯ" ಈ ಶ್ಲೋಕದ ಮೊದಲ ಸಾಲಿನ ಎಲ್ಲ ಪದಗಳು ಸಪ್ತಮಿ ವಿಭಕ್ತಿಯಲ್ಲಿವೆ, ಎಂದರೆ ತೀವ್ರ ರೋಗದ ಹೀನಾಯ ಸಂದರ್ಭದಲ್ಲಿ ಮಾತ್ರ ಎಂಬ ಅರ್ಥವನ್ನು ನೀಡುತ್ತವೆ. ಇನ್ನು ಎರಡನೇ ಸಾಲಿನಲ್ಲಿರುವ ವೈದ್ಯಃ ಮತ್ತು ಹರಿಃ ಎಂಬ ಪದಗಳು ಪ್ರಥಮ ವಿಭಕ್ತಿಯಲ್ಲಿ ಇರುವುದರಿಂದ ಸ್ವಲ್ಪ ಗೊಂದಲವಾಗುವುದು ಸಹಜ ಆದರೆ ಮೊದಲನೇ ಸಾಲಿನ ಅರ್ಥಕ್ಕನುಗುಣವಾಗಿ ಓದಿದಾಗ ಸಾಕ್ಷಾತ್ ನಾರಾಯಣನೇ ವೈದ್ಯನಾಗಬೇಕಾದೀತು ಎಂಬಾರ್ಥವನ್ನು ನೀಡುತ್ತದೆ. ಎಲ್ಲ ವ್ಯಾಧಿಗಳನ್ನೂ ವೈದ್ಯರುಗಳ...
Comments
Post a Comment