ಏನಿದು ವೈದ್ಯೋ ನಾರಾಯಣೋ ಹರಿಃ??🤔 ಇಂದು ಮುಂಜಾನೆಯಿಂದಲೂ ಎಲ್ಲರ ಬಾಯಲ್ಲೂ ಕೇಳಿದ ಒಂದೇ ಸಾಲು ವೈದ್ಯೋ ನಾರಾಯಣೋ ಹರಿಃ, ಕನ್ನಡದಲ್ಲಿ ಓದಿದಾಗ ಸಹಜವಾಗಿಯೇ ಇದರ ಅರ್ಥವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಹೆಚ್ಚು.. ನೀವೇನಂದುಕೊಂಡಿದ್ದೀರಿ?! ವೈದ್ಯ ಸಾಕ್ಷಾತ್ ನಾರಾಯಣನಿಗೆ ಸಮ ಎಂದೇ?!! ಇದೊಂದು ಸಂಸ್ಕೃತ ಸುಭಾಷಿತದ ಶ್ಲೋಕ.. ಈ ಶ್ಲೋಕವನ್ನು ಪೂರ್ಣವಾಗಿ ಒಮ್ಮೆ ಅವಲೋಕಿಸೋಣ.. शरीरे जर्जरीभूते व्याधिग्रस्ते कलेबरे । औषधं जाह्नवीतोयं वैद्यो नारायणो हरिः ॥ ಆಯುರ್ವೇದದ ಕೃಪೆಯಿಂದಾಗಿ ನಾನರಿತಿರುವ ಸಂಸ್ಕೃತದ ಅಲ್ಪ ಜ್ಞಾನದಿಂದ ಇದರ ಅರ್ಥವನ್ನು ಹೀಗೆನ್ನಬಹುದು.. "ತೀವ್ರ ವ್ಯಾಧಿಯಿಂದ ಹೀನಾಯ ಸ್ಥಿತಿಯಲ್ಲಿರುವ ದೇಹಕ್ಕೆ ಗಂಗಾಜಲವೇ ಔಷಧ ಮತ್ತು ಸಾಕ್ಷಾತ್ ನಾರಾಯಣನೇ ವೈದ್ಯ" ಈ ಶ್ಲೋಕದ ಮೊದಲ ಸಾಲಿನ ಎಲ್ಲ ಪದಗಳು ಸಪ್ತಮಿ ವಿಭಕ್ತಿಯಲ್ಲಿವೆ, ಎಂದರೆ ತೀವ್ರ ರೋಗದ ಹೀನಾಯ ಸಂದರ್ಭದಲ್ಲಿ ಮಾತ್ರ ಎಂಬ ಅರ್ಥವನ್ನು ನೀಡುತ್ತವೆ. ಇನ್ನು ಎರಡನೇ ಸಾಲಿನಲ್ಲಿರುವ ವೈದ್ಯಃ ಮತ್ತು ಹರಿಃ ಎಂಬ ಪದಗಳು ಪ್ರಥಮ ವಿಭಕ್ತಿಯಲ್ಲಿ ಇರುವುದರಿಂದ ಸ್ವಲ್ಪ ಗೊಂದಲವಾಗುವುದು ಸಹಜ ಆದರೆ ಮೊದಲನೇ ಸಾಲಿನ ಅರ್ಥಕ್ಕನುಗುಣವಾಗಿ ಓದಿದಾಗ ಸಾಕ್ಷಾತ್ ನಾರಾಯಣನೇ ವೈದ್ಯನಾಗಬೇಕಾದೀತು ಎಂಬಾರ್ಥವನ್ನು ನೀಡುತ್ತದೆ. ಎಲ್ಲ ವ್ಯಾಧಿಗಳನ್ನೂ ವೈದ್ಯರುಗಳ...
ಜುಲೈ೦೧ರಂದು ಭಾರತದ ರಾಷ್ಟ್ರೀಯ ವೈದ್ಯ ದಿನಾಚಾರಣೆಯನ್ನು ಆಚರಿಸುತ್ತೆವೆ ಈ ದಿನವು ವೈದ್ಯಶಿರೋಮಣಿ ಭಾರತ ರತ್ನ ಡಾ. ಬಿದಾನ್ ಚಂದ್ರ ರಾಯ್ ಅವರ ಜನ್ಮದಿನಚರಣೆ ಹಾಗು ಭಾವಪೂರ್ವ ಸ್ಮರಣೆಗಾಗಿ ಆಚರಿಸಲಾಗುತ್ತದೆ, ಇವರು ಓರ್ವ ವೈದ್ಯ. ರಾಜಕೀಯನಾಯಕ. ಸ್ವಾತಂತ್ರ್ಯಹೋರಾಟಗಾರ ಅಷ್ಟೆ ಅಲ್ಲದೆ ಓರ್ವ ಮಾನವತಾವಾದಿಯೂ ಹೌದು. ಇವರ ಜನನ ಬಿಹಾರಿನ ಪಾಟ್ನಾದ ಬಳಿ ಇರುವ ಗಂಗಾತೀರದ ಬಂಕಿಪುರ ಗ್ರಾಮದಲ್ಲಿ ಜುಲೈ ೦೧. ೧೮೮೨ರಲ್ಲಿ ಆಯಿತು, ತಂದೆ ಪ್ರಕಾಶ್ ಚಂದ್ರ. ತಾಯಿ ಕಾಮಿನಿದೇವಿ. ಬಾಲ್ಯದಿಂದಲೂ ತಮ್ಮ ಪೋಷಕರ ಶಿಸ್ತು ಮತ್ತು ಸರಳತೆಯಿಂದ ಪ್ರಭಾವಿತರಾದ ಬಿದಾನರು ಪರೋಪಕಾರ ಮತ್ತು ದಾನಗಳಲ್ಲಿ ಹೆಚ್ಚುಆಸಕ್ತಿ ಹೊಂದಿದ್ದರು. ಹದಿನಾಲ್ಕರ ಹರಯದಲ್ಲೆ ತಮ್ಮ ತಾಯಿಯನ್ನು ಅಸುನೀಗಿದ ಬಿದಾನರು ಕಿರಿವಯಸ್ಸಿನಲ್ಲೇ ಬಡತನದ ಶೋಷಣೆಗೆ ತುತ್ತಾದರು. ಪಾಟ್ನ ವಿಶ್ವವಿದ್ಯಾಲಯದಲ್ಲಿ ತಮ್ಮ ಬಿ. ಎ ಪದವಿಯನ್ನು ಮುಗುಸಿದ ಕೂಡಲೇ ಬಿದಾನರಿಗೆ ಬಿಹಾರದ ಲಫ್ಟಿನಂಟ್ ಗವರ್ನರ್ರಿಂದ ಕಲೆಕ್ಟರ್ ಪದವಿಯ ಆಹ್ವಾನ ಬಂದಿತ್ತು ಉನ್ನತ ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬಿದಾನರು ಈ ಆಹ್ವಾನವನ್ನು ತಳ್ಳಿಹಾಕಿ. ಬಂಗಾಳದ ಎಂಜಿನೀಯರಿಂಗ್ ಕಾಲೇಜು ಮತ್ತು ಕಲ್ಕತ್ತಾದ ಮಡಿಕಲ್ ಕಾಲೇಜುಗಳಿಗೆ ಅರ್ಜಿ ಸಲ್ಲಿಸುವುದರ ಮೂಲಕ ತಮ್ಮ ಮುಂದಿನ ವ್ಯಾಸಂಗದ ಯೋಜನೆ ಮಾಡಿದರು, ಈ ಪೈಕಿ ಅವರಿಗೆ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ...
‘’ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" 15ನೇ ಶತಮಾನದ ಜ್ಞಾನಮಣಿ ಮುಕುಟ ಕನಕದಾಸರ ಸಾಲುಗಳಿವು, ಹೊಟ್ಟೆಪಾಡಿಗಾಗಿ ದುಡಿಯಲು ಬಹಳಷ್ಟು ನೌಕರಿಗಳಿವೆ ಆದರೆ ಹೊಟ್ಟೆಪಾಡಿನ ಜೊತೆಜೊತೆಗೆ ಆತ್ಮ ಸಂತೃಪ್ತಿಯನ್ನು ಗಳಿಸಬಹುದಾದ ಕೆಲವೇ ಹುದ್ದೆಗಳಲ್ಲಿ ವೈದ್ಯ ವೃತ್ತಿಯೂ ಒಂದು. ವೈದ್ಯನಾದ ಮಾತ್ರಕ್ಕೆ ಬದುಕು ಸಾರ್ಥಕವೆಂದೆನಲ್ಲ, ವೈದ್ಯನನ್ನು "ಯಮರಾಜ ಸಹೋದರ" ಎಂದೂ ಹೇಳಿರುವುದುಂಟು. ಚರಕ ಸಂಹಿತೆ ಪ್ರತಿಪಾದಿಸುವಂತೆ ಕೋಚಿತ್ ಧರ್ಮಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕೊಚಿತ್ ಅರ್ಥಕ್ಕೆ ನಂತರದ ಆದ್ಯತೆ ಬರಬೇಕು. ವಿಶ್ವ ಸಂಸ್ಕೃತಿಗೆ ಭಾರತದ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗ ಮತ್ತು ಆಯುರ್ವೇದ ಅಗ್ರಮಾನ್ಯವಾದವುಗಳು. ಜ್ಞಾನ ಮತ್ತು ಸಂಸ್ಕೃತಿಗಳೇ ಜಗತ್ತನಾಳುವ ಶಕ್ತಿಗಳು ಇವನ್ನು ಸಾಫ್ಟ್ ಪವರ್ಸ್ ಎಂದು ಪರಿಗಣಿಸಲಾಗುತ್ತದೆ. ಭಾರತ ಮರಳಿ ವಿಶ್ವಗುರುವಾಗಲು ಈ ಸಾಫ್ಟ್ ಪವರ್ ಗಳ ಕುರಿತು ಹೆಚ್ಚು ಗಮನಹರಿಸಬೇಕಿದೆ, ಭಾರತ ಸರ್ಕಾರ, ಅಣುಶಕ್ತಿ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಜೊತೆಗೆ ಕಲೆ ಮತ್ತು ಸಂಸ್ಕೃತಿಗಳ ಉತ್ತೇಜನಕ್ಕಾಗು ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. G20 ಶೃಂಗಸಭೆಯ ನಾಯಕತ್ವದಲ್ಲಿ ಭಾರತ ಸಂಸ್ಕೃತಿಯ ಅನಾವರಣ ಜಗತ್ತಿಗಾ...
Comments
Post a Comment