ಆಯುರ್ವೇದ : ಒಂದು ಕಿರು ಪರಿಚಯ
ಆಯುರ್ವೇದವು ಬಹುಶಃ ಮಾನವ ನಾಗರಿಕತೆಯ ಅತ್ಯಂತ ಪುರಾತನ ವೈದ್ಯಶಾಸ್ತ್ರ ಹಾಗೂ ಇಂದಿಗೂ ತನ್ನ ಮೂಲರೂಪದಲ್ಲಿಯೇ ಪ್ರಸ್ತುತವಾಗಿರುವ ಏಕೈಕ ಜೀವನ ಶಾಸ್ತ್ರ. ಆಧುನಿಕತೆಯ ಅಲೆಯಲ್ಲಿ ಅದೆಷ್ಟೋ ಶಾಸ್ತ್ರಗಳು ಕೊಚ್ಚಿಹೋದರೂ ಆಯುರ್ವೇದ ತನ್ನ ಹಿರಿಮೆ ಹಾಗೂ ಗರಿಮೆಗಳಿಂದ ಅಚಲವಾಗಿ ಎಂದಿಗೂ ಸ್ಥಿರವಾಗಿದೆ. ವಿಶ್ವದಾದ್ಯಂತ ಆಯುರ್ವೇದ ಕೇವಲ ವೈದ್ಯಶಾಸ್ತ್ರವಷ್ಟೇ ಅಲ್ಲದೆ ಜೀವನ ವಿಜ್ಞಾನವಾಗಿ ಬಳಕೆಯಾಗುತ್ತಿದೆ. ಆಯುರ್ವೇದ ಒಂದು ಸಂಸ್ಕೃತ ಶಬ್ದ ಇದನ್ನು ಬಿಡಿಸಿದಾಗ “ಆಯಸ್ಸಿನ ಜ್ಞಾನ” ಅಥವಾ “ಜೀವನದ ಜ್ಞಾನ” ಎಂಬ ಕನ್ನಡ ಅರ್ಥ ದೊರೆಯುತ್ತದೆ. ಆದಿ ದಿನಗಳಿಂದಲೂ ಆಯುರ್ವೇದ ವೈಯಕ್ತಿಕ ಆರೋಗ್ಯದ ಜೊತೆ ಜೊತೆಗೆ ಸಮುದಾಯದ ಆರೋಗ್ಯವನ್ನು ಒಂದು ಪ್ರಮುಖ ಕಾಳಜಿಯಾಗಿ ಪರಿಗಣಿಸುತ್ತಾ ಬಂದಿರುವುದು ಇದರ ವಿಶಿಷ್ಟತೆ. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಔಷಧಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಒಟ್ಟು ದೇಶಿಯ ಉತ್ಪಾದನೆ (GDP) ಯಲ್ಲಿ ಹೆಚ್ಚುತ್ತಿರುವ ಆಯುರ್ವೇದದ ಪಾಲುದಾರಿಕೆ ಆಯುರ್ವೇದದ ಮಾನ್ಯತೆಗೆ ಕೈಗನ್ನಡಿಯಾಗಿದೆ. ಆಯುರ್ವೇದದ ಉಗಮ ಸೃಷ್ಟಿಯ ಉಗಮದೊಂದಿಗೆ ಆಗಿರಬೇಕು. ಆದರೂ ಪ್ರಸ್ತುತ ಪುರಾವೆಗಳ ಪ್ರಕಾರ ಇತಿಹಾಸಕಾರರು ಆಯುರ್ವೇದವನ್ನು ...