Posts

Showing posts from July, 2023

ಅಭಯಹಸ್ತ

Image
ಎಲ ್ಲ ಶ ಕ್ತಿಯು ನಿಮ್ಮಲಿಹುದು ತಡವು ಏತಕೆ ವೃತ್ತಿಗೆ । ಕಾದು ಕುಳಿತಿಹರೆಲ್ಲ ಜನರು ನಿಮ್ಮಗಾದ ಪ್ರವೃತ್ತಿಗೆ ।। ಒಗೆದು ಬಿಸುಡಿ ಸೋಲ ಭಯಗಳ ಸೋಲೆ ಗೆಲುವಿಗೆ ಮೆಟ್ಟಿಲು । ಸೋಲೆಬಾರದು ಪರಿಶ್ರಮದಲಿ ಪ್ರಯತ್ನಿಸಾಗಸ ಮುಟ್ಟಲು ।। ಕೀಳರಿಮೆಯೇ ದೊಡ್ಡ ಶತ್ರುವು ಎಲ್ಲ ಕನಸಿಗೆ ಬಾಧವು । ಚಿತ್ತ ಸ್ಥಿರತೆಯು, ನಿಶ್ಚಲಾತ್ಮವು, ಗುರಿಯ ತಲುಪಲು ಬೋಧವು ।। ಏಳಿ ಯೋಧರೆ ಹಾರಿ ಶಿಖರಕೆ, ಕಣ್ಣು ಮುಚ್ಚುವ ಮುನ್ನವೇ । ಉಸಿರು ಕಳೆದು, ಹೆಸರು ಅಳಿದು, ಮಣ್ಣು ಮುಚ್ಚುವ ಮುನ್ನವೆ ।। ✍️ನಾಬಾಹಿ

ತಸ್ಮೈ ಶ್ರೀ ಗುರವೇ ನಮಃ🙏

Image
ಎನಿತು ನಮಿಸಲಿ ಆತ್ಮಬಂಧುವೆ ಆಪ್ತರಕ್ಷಕರೆ ಶಿಕ್ಷಕರು ಕೋಟಿ ನಮನಕೂ ನಿಲುಕಲಾರರು ಜ್ಞಾನ ಮಂದಿರದ ಅರ್ಚಕರು  ನುಡಿಯಕಲಿಸಿದರು ನೆಡೆಯಕಲಿಸಿದರು ನಾಡ ಕಟ್ಟುವ ಕಿಚ್ಚುಹಚ್ಚಿದರು ನೀತಿ ಕಲಿಸುತಲೆ ಪ್ರೀತಿ ಕಲಿಸಿದರು ದೇಶ ಸೇವೆಯ ಹುಚ್ಚು ಮೆಚ್ಚಿದರು  ನೂನ್ಯ ನಾನು ಶೂನ್ಯ ನಾನು ಸಿದ್ದಿ ಗುರುವಿನ ಭಿಕ್ಷೆಯು ಗುರುವ ವರಕಿಂ ಗರಿಮೆಯೇನು ಗುರುವ ಹರಕೆಯೆ ರಕ್ಷೆಯು  ಹರಸಿ ಮೆರೆಸಿ ಅರಿವ ಹರಿಸಿ ಮೂರ್ತಿಯಾಗಿಸಿ ನಾಳೆಗೆ ಮಂದಗಣ್ಣಿಗೆ ಬೆಳಕನೆರೆದರು ಶಿಲ್ಪಿಯಾದರೂ ಬಾಳಿಗೆ ಗುರುವ ತೊರೆಯೆನು ಸ್ವಪ್ನದಲ್ಲೂ ಬದುಕ ಋಣವೇ ಮೀಸಲು ನಿಮ್ಮ ನೆನಪೇ ಮೊದಲು ನನಗೆ ತಂಪು ಗಾಳಿಯೆ ಬೀಸಲು. ✍️ ನಾಬಾಹಿ ಡಾ. ಹಿತೇಶ್ ಪ್ರಸಾದ್ ಬಿ.