Posts

Showing posts from July, 2025

ಅರ್ಥಶೋಧ

ಅಂತರಂಗದ ಪ್ರಶ್ನೆ ಕೆಣಕುತಿಹುದು  ಅಂತರಾತ್ಮನ ನಿತ್ಯ ಅಣುಕುತಿಹುದು ಎತ್ಯಹೊರಟಿಯೊ ಮರುಳೆ ಅರ್ಥಕ್ಕಾಗಿ  ಪುರುಷಾರ್ಥಗಳ ನೆಪದ ಸ್ವಾರ್ಥಕ್ಕಾಗಿ ಸಂಘರ್ಷ ಹೋರಾಟ ಖಾತ್ರಿಯಾಗಿ ದಿಕ್ಸೂಚಿ ಇರದ ಚಿರಯಾತ್ರೆಯಾಗಿ    ಗುರಿಯೆಡೆಗೆ ಹೆದ್ದಾರಿ ಅನುಮಾನವೇ ಹೆಜ್ಜೆಹೆಜ್ಜೆಯ ತಿರು ವು ಅನಿವಾರ್ಯವೇ ಗೊಂದಲದ ನಡಿಗೆಯಿದು ನಿಯತಿಯೇನು ಬದುಕ ಯೋಜನೆಯೆಲ್ಲ ಭ್ರಾಂತವೇನು  ಅನುದಿನದ ಬಡಿದಾಟ ಅರ್ಥಕ್ಕಾಗಿ ತೀವ್ರತೆಯ ಹುಡುಕಾಟ ವ್ಯರ್ಥವಾಗಿ ಬರಿದೆ ಓಟವು ದಿನವೂ ಆರ್ಥಿಕತೆಯಡೆಗೆ.  ಹೆಜ್ಜೆ ಹಾಕುವುದೆಂತು ಸಾರ್ಥಕತೆಯಡೆಗೆ  ಕಾತುರದಿ ಕೇಳುವೆನು ನನ್ನೇ ನಾನು   ವಿಧಿಯಟ್ಟಹಾಸವಿದು ನ್ಯಾಯವೇನು ಹೇಳು ದೇವರೇ ನನ್ನ ತಪ್ಪದೇನು ಎಲ್ಲವನು ಮೌನದಲೇ ಒಪ್ಪಲೇನು ✍️ನಾಬಾಹಿ