Posts

Showing posts from December, 2022

ಹೊಸವರ್ಷದಿ ಹೊಸತೇನು??

Image
  ಹಳೆ  ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು । ಹಳೆ ಹಿಮಾಚಲ ಗಂಗೆ ಹಳೆ ವಂಶಚರಿತೆ ॥ ಹಳೆಯವಿವು ನೀನದರೊಳಾವುದನು ಕಳೆದೀಯೊ? । ಹಳದು ಹೊಸತರೊಳಿರದೆ? - ಮಂಕುತಿಮ್ಮ ॥                                            ಡಿ. ವಿ. ಗುಂಡಪ್ಪ               ಜ ನವರಿ 1 ರಂದು ವಿಶ್ವದಾದ್ಯಂತ ಹೊಸವರ್ಷವನ್ನು ಆಚರಿಸಲಾಗುತ್ತದೆ ಆದರೆ ಈ ದಿನಾಚರಣೆಗೆ 4000 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ ಎಂದರೆ ನಂಬಲಸಾಧ್ಯ . ಹೊಸ ವರ್ಷಾಚರಣೆಯ ಮೊಟ್ಟಮೊದಲ ಪುರಾವೆ ರೋಮನ್ ಇತಿಹಾಸದ ಬ್ಯಾಬಿಲೋನ್ ನಾಗರಿಕತೆಯ ಸುಮೇರಿಯನ್ ಕ್ಯಾಲೆಂಡರ್ನಲ್ಲಿ ಕಂಡುಬರುತ್ತದೆ . ಈ ಕ್ಯಾಲೆಂಡರ್ನಲ್ಲಿ ಕೇವಲ 10 ತಿಂಗಳುಗಳಿದ್ದವು , ಇದರ ಮೊದಲ ತಿಂಗಳು ಮಾರ್ಚ್ , ಅವರ ಆಕಾಶ ದೇವತೆಯಾದ ಮಾರ್ಡುಕ್ ಗೆ ಈ ತಿಂಗಳು ಮೀಸಲಾಗಿತ್ತು . ಮುಂದೆ ಕ್ರಮವಾಗಿ ಸಪ್ತ ಅಂದರೆ ಏಳನೇ ತಿಂಗಳಿಗೆ ಸಪ್ಟೆಂಬರ್ , ಆಕ್ಟಾ ಎಂದರೆ ಎಂಟನೇ ತಿಂಗಳಿಗೆ ಅಕ್ಟೋಬರ್ , ನವ ಎಂದರೆ 9ನೇ ತಿಂಗಳಿಗೆ ನವಂಬರ್ ಮತ್ತು ಡೆಕಾ ಎಂದರೆ 10...