Posts

Showing posts from August, 2021

ಸ್ವಸ್ಥ ಏವ ಹತೊ ಹಂತಿ, ಸ್ವಸ್ಥೊ ರಕ್ಷತಿ ರಕ್ಷಿತಃ

Image
        ಹೌದು ಮೇಲಿನ ಶೀರ್ಷಿಕೆ ಮಹಾಭಾರತದ ಧರ್ಮೋ ರಕ್ಷತಿ ರಕ್ಷಿತಃ ಸೂತ್ರದ ಸಣ್ಣ ಮಾರ್ಪಾಡು, ಆರೋಗ್ಯದ ನಾಶವೇ ಸರ್ವನಾಶ ಮತ್ತು ಆರೋಗ್ಯದ ರಕ್ಷೆಯೇ ಶ್ರೀರಕ್ಷೆ ಎಂಬುದು ಇದರ ಅರ್ಥ. ಪುರುಷಾರ್ಥಗಳಾದ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಗಳನ್ನು ಪಡೆಯಲು ಆರೋಗ್ಯವೇ ಮೂಲ ಹಾಗಾಗಿ ಧರ್ಮವನ್ನು ಆಚರಿಸಲಾದರೂ ಆರೋಗ್ಯವು ಬೇಕಲ್ಲವೇ. ಆಯುರ್ವೇದ ಶಾಸ್ತ್ರವು ಎಲ್ಲಾ ಒಳಿತುಗಳಿಗೂ ಉತ್ತಮ ಆರೋಗ್ಯವೇ ಮೂಲ ಎಂದು ಸಾರುತ್ತದೆ. ಆರೋಗ್ಯದ ಕುರಿತಾಗಿ ಜಾಗತಿಕ ಮಟ್ಟದ ಜಾಗೃತಿ ಮೂಡಿಸಲು 1948ರ ಏಪ್ರಿಲ್ 7ರಂದು ಸ್ಥಾಪಿತವಾದ ವಿಶ್ವ ಆರೋಗ್ಯ ಸಂಸ್ಥೆಯ ಸ್ಮರಣಾರ್ಥ ಪ್ರತಿವರ್ಷ ಆ ದಿನವನ್ನು “ವಿಶ್ವ ಆರೋಗ್ಯ ದಿನ”ವನ್ನಾಗಿ ಆಚರಿಸಲಾಗುತ್ತದೆ. "ಉತ್ತಮ ಮತ್ತು ಆರೋಗ್ಯಕರ ಜಗತ್ತನ್ನು ನಿರ್ಮಿಸೋಣ" (Building fairer and healthier world) ಇದು ಈ ವರ್ಷದ ವಿಶ್ವ ಆರೋಗ್ಯ ದಿನದ ಧ್ಯೇಯವಾಕ್ಯ.          ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯವನ್ನು ಹೀಗೆ ವ್ಯಾಖ್ಯಾನಿಸುತ್ತದೆ, "ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ - ಕೇವಲ ರೋಗ, ಭಾದೆಗಳ ಅಭಾವವಲ್ಲ" ಇದರ ಅನುಸಾರ ಸ್ವಾಸ್ಥ್ಯವೆಂದರೆ ಕೇವಲ ಅನಾರೋಗ್ಯದ ಅಭಾವೆಂದಷ್ಟೇ ಅಲ್ಲ ಆರೋಗ್ಯಕ್ಕೆ ಹಲವು ಆಯಾಮಗಳಿವೆ ಶಾರೀರಿಕ ಸ್ವಾಸ್ಥ್ಯ ಮಾನಸಿಕ ಸ್ವಾಸ್ಥ್ಯ ಮತ್ತು ಸಾಮಾಜಿಕ ಸ್ವಸ್ತ್ಯ ಆರೋಗ್ಯದ ಪ್ರಮುಖ ಆಯ...