ಅರೆಗಣ್ಣಯೋಧ
ಏನಹೇಳಲಿ ನಾನು ಅರೆಗಣ್ಣ ಯೋಧ, ಎಡೆಬಿಡದೆ ಸಾಗಿದೆ ಜೀವನದ ಶೋಧ ಆದರ್ಶಗಳ ಬೆದಕಿ ಅಲೆದಾಟವಾಯ್ತು ಅರ್ಥವರಿಯದ ಶ್ವಾಸ ಅನವರತವಾಯ್ತು ಹುಡುಕಿ ಸೋತರು ಸಾಕ್ರಿಟೀಸ ಡಯಜೀನ ಕಲಿಯುಗದಿ ಸದ್ಗುಣವೂ ಮೇಡಿನ್ನು ಚೀನ ಯಾರು ಹೊಣೆ ದೈವದೀ ಸಂಚುಗಳಿಗೆಲ್ಲ ಎದೆಗೆ ಬಡಿದ ಸಿಡಿಲು ಮಿಂಚುಗಳಿಗೆಲ್ಲ ಸವಿದು ಚಪ್ಪರಿಸಾಯ್ತು ನೋವೆಲ್ಲವನ್ನು ಸಾವೊಂದೆ ಸಿಹಿ ಭಕ್ಷ ದೊರೆತಿಲ್ಲವಿನ್ನು. ಏನೊ ಹುಡುಕಿ ದಿನವು ಚಡಪಡಿಸುತಿರುವೆ ಅರಿಯದಾದೇನು ಕೊನೆಗೂ ಏನನರಸಿರುವೆ ಬೇಡದ ಬೇಕುಗಳು ಮಿಕ್ಕಿಹವು ಇನ್ನಷ್ಟು ನಕ್ಕು ಬಿಡು ಬದುಕೆ ಜೀವಿ ಸುವೆ ಒಂದಿಷ್ಟು. ✍️ನಾಬಾಹಿ