ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ಜುಲೈ೦೧ರಂದು ಭಾರತದ ರಾಷ್ಟ್ರೀಯ ವೈದ್ಯ ದಿನಾಚಾರಣೆಯನ್ನು ಆಚರಿಸುತ್ತೆವೆ ಈ ದಿನವು ವೈದ್ಯಶಿರೋಮಣಿ ಭಾರತ ರತ್ನ ಡಾ. ಬಿದಾನ್ ಚಂದ್ರ ರಾಯ್ ಅವರ ಜನ್ಮದಿನಚರಣೆ ಹಾಗು ಭಾವಪೂರ್ವ ಸ್ಮರಣೆಗಾಗಿ ಆಚರಿಸಲಾಗುತ್ತದೆ, ಇವರು ಓರ್ವ ವೈದ್ಯ. ರಾಜಕೀಯನಾಯಕ. ಸ್ವಾತಂತ್ರ್ಯಹೋರಾಟಗಾರ ಅಷ್ಟೆ ಅಲ್ಲದೆ ಓರ್ವ ಮಾನವತಾವಾದಿಯೂ ಹೌದು. ಇವರ ಜನನ ಬಿಹಾರಿನ ಪಾಟ್ನಾದ ಬಳಿ ಇರುವ ಗಂಗಾತೀರದ ಬಂಕಿಪುರ ಗ್ರಾಮದಲ್ಲಿ ಜುಲೈ ೦೧. ೧೮೮೨ರಲ್ಲಿ ಆಯಿತು, ತಂದೆ ಪ್ರಕಾಶ್ ಚಂದ್ರ. ತಾಯಿ ಕಾಮಿನಿದೇವಿ. ಬಾಲ್ಯದಿಂದಲೂ ತಮ್ಮ ಪೋಷಕರ ಶಿಸ್ತು ಮತ್ತು ಸರಳತೆಯಿಂದ ಪ್ರಭಾವಿತರಾದ ಬಿದಾನರು ಪರೋಪಕಾರ ಮತ್ತು ದಾನಗಳಲ್ಲಿ ಹೆಚ್ಚುಆಸಕ್ತಿ ಹೊಂದಿದ್ದರು. ಹದಿನಾಲ್ಕರ ಹರಯದಲ್ಲೆ ತಮ್ಮ ತಾಯಿಯನ್ನು ಅಸುನೀಗಿದ ಬಿದಾನರು ಕಿರಿವಯಸ್ಸಿನಲ್ಲೇ ಬಡತನದ ಶೋಷಣೆಗೆ ತುತ್ತಾದರು. ಪಾಟ್ನ ವಿಶ್ವವಿದ್ಯಾಲಯದಲ್ಲಿ ತಮ್ಮ ಬಿ. ಎ ಪದವಿಯನ್ನು ಮುಗುಸಿದ ಕೂಡಲೇ ಬಿದಾನರಿಗೆ ಬಿಹಾರದ ಲಫ್ಟಿನಂಟ್ ಗವರ್ನರ್ರಿಂದ ಕಲೆಕ್ಟರ್ ಪದವಿಯ ಆಹ್ವಾನ ಬಂದಿತ್ತು ಉನ್ನತ ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಬಿದಾನರು ಈ ಆಹ್ವಾನವನ್ನು ತಳ್ಳಿಹಾಕಿ. ಬಂಗಾಳದ ಎಂಜಿನೀಯರಿಂಗ್ ಕಾಲೇಜು ಮತ್ತು ಕಲ್ಕತ್ತಾದ ಮಡಿಕಲ್ ಕಾಲೇಜುಗಳಿಗೆ ಅರ್ಜಿ ಸಲ್ಲಿಸುವುದರ ಮೂಲಕ ತಮ್ಮ ಮುಂದಿನ ವ್ಯಾಸಂಗದ ಯೋಜನೆ ಮಾಡಿದರು, ಈ ಪೈಕಿ ಅವರಿಗೆ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ...